ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ಗಂಡನಿಗೆ ಡಿವೋರ್ಸ್ ಕೊಟ್ಟ ನಟಿ

ಇತ್ತೀಚಿನ ದಿನಗಳಲ್ಲಿ ವಿಚ್ಛೇದನಗಳು ಹೆಚ್ಚಾಗುತ್ತಿವೆ.ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಅನೇಕ ತಾರೆಯರು ವಿಚ್ಛೇದನ ಪಡೆದಿದ್ದಾರೆ. ಈ ಸಾಲಿಗೆ ಈಗ ಸಂಯಕ್ತಾ ಷಣ್ಮುಗನ್ ಸೇರಿಕೊಂಡಿದ್ದಾರೆ.
ಹೌದು, ಸಂಯುಕ್ತಾ ಷಣ್ಮುಗನ್, ಕಾಲಿವುಡ್‌ನ ಕಿನ್ನರಿ. 2007ರಲ್ಲಿ ಮಿಸ್ ಚೆನ್ನೈ ಕಿರೀಟವನ್ನು ಮುಡಿಗೇರಿಸಿಕೊಂಡ ಚೆಲುವೆ.ತುಘ್ಲಕ್ ದರ್ಬಾರ್, ವಾರಿಸು, ಸೇರಿ ಹಲವು ಚಿತ್ರಗಳಲ್ಲಿ ಆ ನಂತರ ಕಾಣಿಸಿಕೊಂಡ ಸಂಯುಕ್ತಾ 2020ರಲ್ಲಿ ತಮಿಳಿನ ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಸ್ಫರ್ಧಿಯಾಗಿದ್ದರು. ಇಂಥಾ ಸಂಯುಕ್ತಾ ಷಣ್ಮುಗನಾಥನ್ ಈಗ ತಮ್ಮ ಪತಿ ಕಾರ್ತಿಕ್ ಶಂಕರ್ ಅವರಿಂದ ದೂರವಾಗಿದ್ದಾರೆ. ಫೋಟೊಶೂಟ್ ಮೂಲಕ ವಿಚ್ಛೇದನದ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.
ಇನ್ನು ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಸಂಯುಕ್ತಾ, ಎಲ್ಲಾ ಪೇಪರ್ ಕೆಲಸಗಳನ್ನು ಮುಗಿಸಿದ್ದೇನೆ, ಹಿಂದೆಂದಿಗಿಂತಲೂ ನಾನು ಬಲಶಾಲಿಯಾಗಿದ್ದೇನೆ ಎಂದು ಹೇಳಿದ್ದಾರೆ. ಡಿವೋರ್ಸ್ ನಂತರ ನನ್ನ ಮುಖದ ಕಳೆ ಎಂದು ತಮ್ಮ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ, ಹಿಂಬಾಲಕರಿಗೆ ಶಾಕ್ ನೀಡಿದ್ದಾರೆ. ಅಚ್ಚರಿಗೆ ದೂಡಿದ್ದಾರೆ.