ಮದುವೆಗೆ ಸಿಕ್ಕ ಕೋಟ್ಯಾಂತರ ರೂಪಾಯಿ ಗಿಫ್ಟ್ ವೃದ್ಧಾಶ್ರಮಕ್ಕೆ ಕೊಟ್ಟ ಡಾಲಿ‌ ಧನಂಜಯ್

 | 
Dali

ಕನ್ನಡ ಚಿತ್ರರಂಗದ ನಟ ಡಾಲಿ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಕಳೆದ ವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಅತ್ಯಂತ ಅದ್ಧೂರಿಯಾಗಿ ನೆರವೇರಿತು. ಈ ಅದ್ಧೂರಿ ಮದುವೆಗೆ ಸ್ಯಾಂಡಲ್‌ವುಡ್‌ನ ಹಲವಾರು ಸ್ಟಾರ್‌ ನಟ ನಟಿಯರು, ರಾಜಕೀಯ ಗಣ್ಯರು ಸೇರಿದಂತೆ ಸಾವಿರಾರು ಜನ ಆಗಮಿಸಿ ಶುಭ ಹಾರೈಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಡಾಲಿ ಹಾಗೂ ಧನ್ಯತಾ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಈ ಸುದ್ದಿಯನ್ನು ಕೇಳಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ.

ಡಾಲಿ ಧನಂಜಯ್ ಹಾಗೂ ಧನ್ಯತಾ ಜೋಡಿ ತುಂಬಾ ಅದ್ಭುತವಾಗಿದೆ. ಇವರಿಬ್ಬರನ್ನು ನೋಡಿ ಅಭಿಮಾನಿಗಳು ಹೃದಯ ತುಂಬಿ ಆಶೀರ್ವದಿಸಿದ್ದಾರೆ. ಆದರೆ ಇಷ್ಟೊಂದು ಅದ್ದೂರಿ ಮದುವೆ ಬೇಕಿತ್ತಾ ಅಂತ ಕೆಲವರು ಪ್ರಶ್ನೆ ಮಾಡಿದ್ದಾರೆ. ಆದರೀಗ ಎಷ್ಟೇ ಅದ್ಧೂರಿಯಾಗಿ ಮದುವೆ ಮಾಡಿಕೊಂಡರೂ ಕೂಡ ಈ ಮುದ್ದಾದ ಜೋಡಿ ತಮ್ಮ ಮದುವೆಯ ಖುಷಿಯಲ್ಲಿ ಆಶ್ರಮವೊಂದಕ್ಕೆ ಸಹಾಯ ಧನ ನೀಡಿದೆ.

ಡಾಲಿ ಧನಂಜಯ್ ಹಾಗೂ ಧನ್ಯತಾ ಅವರು ಚಿತ್ರದುರ್ಗದ ಆನಂದ ಕುಟೀರ ಎನ್ನುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ತಮ್ಮ ಕೈಲಾದಷ್ಟು ಹಣ ಸಹಾಯವನ್ನು ಮಾಡಿದ್ದಾರೆ. ಡಾಲಿ ಧನಂಜಯ್ ಹಾಗೂ ಧನ್ಯತಾ ಸುಮಾರು ಐದು ಲಕ್ಷ ರೂಪಾಯಿ ಚೆಕ್ ಅನ್ನು ಈ ಆಶ್ರಮಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

ತಾವು ಬೆಳೆದು ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿರುವ ಈ ಜೋಡಿಗೆ ಅಭಿಮಾನಿಗಳು ಮನಸೋತಿದ್ದಾರೆ. ಸಿನಿಮಾ ನಟ ಡಾಲಿಗೆ ಇಂತಹ ಒಳ್ಳೆಯ ಮನಸ್ಸು ಇದೆ ಅನ್ನೋದು ಇದರಿಂದ ಸಾಬೀತಾಗಿದೆ. ಅಭಿಮಾನಿಗಳು ನಟನ ಈ ದಾರಾಳ ಗುಣವನ್ನು ಕೊಂಡಾಡುತ್ಯಿದ್ದಾರೆ. ಅಲ್ಲದೆ ಮದುವೆ ಬಗ್ಗೆ ಮಾತನಾಡಿದವರಿಗೆ ಈ ವಿಚಾರವನ್ನು ಟ್ಯಾಗ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಬಗ್ಗೆ ತಿಳಿಸುತ್ತಿದ್ದಾರೆ.

Tags