ಇಂತಹ ಜನರನ್ನು ನಾನು ಸುಮ್ಮನೆ ಬಿಡಲ್ಲ ಎಂದ ಸಾಯಿ ಪಲ್ಲವಿ

ಸೌತ್ ಬ್ಯೂಟಿ ಸಾಯಿ ಪಲ್ಲವಿ ಅವರು ಬಾಲಿವುಡು ಚಿತ್ರರಂಗಕ್ಕೆ ಇದೀಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ತನ್ನ ಮುಂದಿನ ಸಿನಿಮಾ 'ರಾಮಾಯಣ'ದಲ್ಲಿ ನಟನೆಗೆ ಇಳಿದಿದ್ದಾರೆ. ಈ ವೇಳೆ ತನ್ನ ನಿತ್ಯಾ ದಿನಚರಿ ಬದಲಾವಣೆ ಬಗ್ಗೆ ಹೊಸ ಸುದ್ದಿಯೊಂದು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಸಾಯಿ ಪಲ್ಲವಿ ಅವರು 'ರಾಮಾಯಣ' ಸಿನಿಮಾಕ್ಕಾಗಿ ಮಾಂಸಾಹಾರಿ ಆಹಾರ ಬಿಟ್ಟಿದ್ದಾರೆ ಎಂಬ ಗಾಸಿಪ್ ಎದ್ದಿದೆ. ರಾಮಾಯಣ ಚಿತ್ರೀಕರಣ ಮುಗಿಯುವವರೆಗೆ ಸಾಯಿ ಪಲ್ಲವಿ ಅವರು ತರಕಾರಿ ತಿನ್ನಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಮೊದಲು ಹಿಂದೂ ಮುಸ್ಲಿಂ ವಿಚಾರವಾಗಿ ಸದ್ದು ಮಾಡಿದ್ದ ಸಾಯಿ ಪಲ್ಲವಿ ಅವರು ಮುಸ್ಲಿಮರ ಪರ ಧ್ವನಿ ಎತ್ತಿ ಮೊದಲ ಬಾರಿಗೆ ವಿವಾದಕ್ಕೆ ಸಿಲುಕಿದ್ದರು.
ಆದರೆ ಇದೀಗ ರಾಮಾಯಣ ಸಿನಿಮಾವ ವಿಚಾರದಲ್ಲೂ ಟ್ವಿಟ್ ಮೂಲಕ ಮತ್ತೆ ಸದ್ದು ಮಾಡಿದ್ದಾರೆ. ಹೌದು ಸಾಯಿ ಪಲ್ಲವಿ ಅವರು ರಾಮಾಯಣ ಸಿನಿಮಾಗೆ ಮಾಂಸಹಾರಿ ಬಿಟ್ಟಿದ್ದಾರೆ ಅಂತ ಸುದ್ದಿ ವೈರಲ್ ಆಗಿದ್ದೆ ತಡ ಒಮ್ಮೆಲೇ ಸಿಡಿದೆದ್ದು ಬಿಟ್ಟಿದ್ದಾರೆ ಸಾಯಿ ಪಲ್ಲವಿ.
ಹೌದು, Xಮೂಲಕ ಸಾಯಿ ಪಲ್ಲವಿ ಅವರು ಟ್ವಿಟ್ ಮಾಡಿದ್ದಾರೆ. ನಾನು ರಾಮಾಯಣ ಸಿನಿಮಾಕ್ಕಾಗಿ ಯಾವುದೇ ತರಕಾರಿ ತಿಂದಿಲ್ಲ.. ಅಥವಾ ಮಾಂಸಹಾರಿಯೂ ಬಿಟ್ಟಿಲ್ಲ. ' ನನ್ನ ಬಗ್ಗೆ ಸುಖಸುಮ್ಮನೆ ಗಾಸಿಪ್ ಮಾಡುವವರನ್ನು ನಾನು ಬಿಡುವುದಿಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ'.