ರಾಧಿಕಾ ಮನೆಯಲ್ಲಿ ಒಂದು‌ ಕೆಲಸ ಮಾಡಲ್ಲ, ಸೊಸೆಗೆ ಯಶ್ ತಾಯಿ ಕೌಂಟರ್

 | 
Yash

ರಾಕಿಂಗ್ ಸ್ಟಾರ್ ಯಶ್ ರಾತ್ರೋ ರಾತ್ರಿ ಸ್ಟಾರ್ ಪಟ್ಟಕ್ಕೆ ಏರಿದವರಲ್ಲ. ಹೌದು ನಟ ಯಶ್ ತಂದೆ ಬಿಎಂಟಿಸಿ ಡ್ರೈವರ್ ಆಗಿದ್ರು ಅನ್ನೋದು ಅನೇಕರಿಗೆ ತಿಳಿದೇ ಇದೆ. ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದ ಯಶ್ ಇದೀಗ ಗ್ಲೋಬಲ್ ಸ್ಟಾರ್ ಆಗಿ ಮಿಂಚುವ ಗುರಿ ಬೆನ್ನಟ್ಟಿದ್ದಾರೆ. ಮಗ ಎಷ್ಟೇ ಎತ್ತರಕ್ಕೆ ಬೆಳೆದ್ರೂ ಅವರ ತಂದೆ-ತಾಯಿ ಮಾತ್ರ ಸರಳವಾಗಿಯೇ ತಮ್ಮೂರಿನಲ್ಲಿ ವ್ಯವಸಾಯ ನೋಡಿಕೊಳ್ತಾ ಜೀವನ ನಡೆಸುತ್ತಿದ್ದಾರೆ.

ನಟ ಯಶ್ ತಂದೆ-ತಾಯಿ ಇಬ್ಬರೂ ಕೂಡ ಹಾಸನದಲ್ಲಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಯಶ್ ತಾಯಿ ಪುಷ್ಪ ಅವರು ಮನಗ ಬಗ್ಗೆ ಹಾಗೂ ಚೆಂದದ ಫ್ಯಾಮಿಲಿ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.ಕೆಲಸದವರು ಇದ್ರೂ ಕೂಡ ನಮ್ಮ ಮನೆಯಲ್ಲಿ ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ತೀವಿ. ಅದೇ ನಮಗೆ ಇಷ್ಟ ಎಂದ ಯಶ್ ತಾಯಿ ಹೇಳಿದ್ರು.

ಸೊಸೆ ಬಂದ್ಮೇಲೂ ಕೆಲಸ ಮಾಡ್ತೀರಾ ಎನ್ನುವ ಜನರ ಪ್ರಶ್ನೆಗೆ ನಿಮ್ಮ ಉತ್ತರ ಏನು ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಯಶ್ ತಾಯಿ, ನನ್ನ ಸೊಸೆಗೆ ಕೆಲಸ ಬರುತ್ತೆ ಅಂದ್ರು. ನನಗೆ ನನ್ನ ಸೊಸೆ ಕೆಲಸ ಮಾಡೋದು ಇಷ್ಟವಿಲ್ಲ ಎಂದು ಯಶ್ ತಾಯಿ ಹೇಳಿದ್ದಾರೆ. ರಾಧಿಕಾ ಅಂತ ಅಲ್ಲ ನನ್ನ ಸೊಸೆ ಯಾರೇ ಆಗಿದ್ರೂ. ಅವರು ಚೆನ್ನಾಗಿರಬೇಕು, ಹೆಚ್ಚಿನ ಕೆಲಸದ ಹೊಣೆ ಅವರ ಮೇಲೆ ಬೀಳಬಾರದು ಎಂದೇ ಭಾವಿಸುತ್ತೇನೆ ಎಂದು ಯಶ್ ತಾಯಿ ಹೇಳಿದ್ರು. 

ನನ್ನ ಸೊಸೆ ಯಾಕೆ ಕಷ್ಟಪಡ್ಬೇಕು. ನಾವೆಲ್ಲಾ ದುಡಿಯುತ್ತಿದ್ದೇವೆ, ಅವಳು ಆರಾಮಾಗಿ ಇರ್ಬೇಕು. ರಾಧಿಕಾ ಬಂದಿದ್ದಾಳೆ ಅಂತ ಅಲ್ಲ. ಯಾರೇ ಆಗಿದ್ರೂ ನನಗೆ ನನ್ನ ಸೊಸೆ ಕಷ್ಟಪಡಬಾರದು ಅನ್ನೋದೆ ನನ್ನ ಆಲೋಚನೆ. ನಾವು ಕಷ್ಟಪಟ್ಟರು ನನ್ನ ಮಕ್ಕಳು ಕಷ್ಟಪಡಬಾರದು ಅನ್ನೋದು ನಮ್ಮ ಆಸೆ ಎಂದ್ರು ಯಶ್ ತಾಯಿ.

ಈಗಿನ ಹುಡುಗಿಯರು ಇಷ್ಟಪಟ್ಟು ಕೆಲಸ ಮಾಡಲ್ಲ. ನಮಗೆ ಕೆಲಸವೇ ಇಷ್ಟ ಹೀಗಾಗಿ ಮಾಡ್ತಿದ್ದೇವೆ. ನನ್ನ ಮಗಳಿಗೆ ಅಲ್ಪ-ಸ್ವಲ್ಪ ಕೆಲಸ ಗೊತ್ತು. ಆದ್ರೆ ರಾಧಿಕಾ ಯಾವತ್ತು ಕೆಲಸ ಮಾಡಿದವರಲ್ಲ ಎಂದಿದ್ದಾರೆ.

Tags