ಮದುವೆ ಬಳಿಕ‌ ನನಗೆ ಈ ಮೊದಲೇ‌ ಒಬ್ಬ ಮಗು ಕೊಟ್ಟಿದ್ದ ಎಂದು ಗಂಡನ‌ ಬಳಿ ಸತ್ಯ ಒಪ್ಪಿಕೊಂಡ ಕಿರುತೆರೆ ನಟಿ

 | 
Actress

ಚಿತ್ರರಂಗದ ಖ್ಯಾತ ನಟಿ ಪ್ರಾರ್ಥನಾ ಬೆಹೆರೆಯವರು ತಮ್ಮ ಹೊಸ ಚಿತ್ರ ಚಿಕಿ ಚಿಕಿ ಬುಬೂಮ್ ಬೂಮ್ ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ವಿ ಹರ್ಡ್ ದಿಸ್ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅವರಿಗೆ ಒಂದು ಪ್ರಶ್ನೆಯನ್ನ ಕೇಳಲಾಗಿತ್ತು. ಅದು 15-16 ಮಕ್ಕಳನ್ನು ಹೊಂದಿರುವ ಬಗ್ಗೆಯಾಗಿತ್ತು. ಈ ಪ್ರಶ್ನೆಗೆ ನಟಿ ಉತ್ತರಿಸಿದ್ದಾರೆ. 

ನಟಿ ಪ್ರಾರ್ಥನಾ ಇತ್ತೀಚೆಗೆ ಸುಮನ್ ಮ್ಯೂಸಿಕ್ ಮರಾಠಿಯ ಆಮ್ಹಿ ಅಸ್ನಾ ಐಕ್ಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಒಂದು ತಮಾಷೆಯ ಪ್ರಶ್ನೆಯನ್ನ ಕೇಳಲಾಗಿತ್ತು. ʼನೀವು 15-20 ಮಕ್ಕಳ ತಾಯಿ ಎಂದು ನಾವು ಕೇಳಿದ್ದೇವೆ. ಆದರೆ ಈ ವಿಷಯವನ್ನ ನೀವು ಬಚ್ಚಿಟ್ಟಿದ್ದೀರಾ?ʼ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಪ್ರಾರ್ಥನಾ ಸಹ ತೀಕ್ಷ್ಣವಾದ ಉತ್ತರವನ್ನೇ ನೀಡಿದ್ದಾರೆ.

ಈ ತಮಾಷೆಯ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಪ್ರಾರ್ಥನಾ, ಹೌದು, ನಿಜ! ನನ್ನ ಒಬ್ಬ ಮಗ ಮದುವೆಗೂ ಮುಂಚೆಯೇ ಹುಟ್ಟಿದ್ದಾನೆ. ಆತನ ಹೆಸರು ಗಬ್ಬರ್‌ ಎಂದು ಹೇಳುತ್ತಾರೆ. ಇಲ್ಲಿ ಗಬ್ಬರ್‌ ಎಂದರೆ ನಟಿಯ ಮಗನಲ್ಲ. ಬದಲಾಗಿ ಅದು ಅವರ ಪ್ರೀತಿಯ ನಾಯಿ. ಪ್ರಾರ್ಥನಾರಿಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ಅವರ ತೋಟದ ಮನೆಯಲ್ಲಿ 7 ನಾಯಿಗಳು ಮತ್ತು ಇನ್ನೂ ಅನೇಕ ಪ್ರಾಣಿಗಳಿವೆ. ಅಲ್ಲದೇ ಹಸುಗಳು ಮತ್ತು 10-12 ಕುದುರೆಗಳು ಸಹ ಇವೆಯಂತೆ.

ತಮ್ಮ ಪ್ರಾಣಿ ಪ್ರೀತಿಯ ಬಗ್ಗೆ ಮಾತನಾಡಿರುವ ನಟಿ ಪ್ರಾರ್ಥನಾ, ಇವರೆಲ್ಲರೂ ನಮ್ಮ ಮಕ್ಕಳು. ಅವರನ್ನ ನೋಡಿಕೊಳ್ಳುವುದು ಸುಲಭವಲ್ಲ, ಆದರೆ ಅವರ ಪ್ರೀತಿ ಬಹಳ ಅಮೂಲ್ಯವಾದುದು. ನಾವು ಈಗ ಮಕ್ಕಳನ್ನು ಬಯಸುವುದಿಲ್ಲ, ಇವುಗಳೇ ನಮ್ಮ ಮಕ್ಕಳು ಅಂತಾ ನಿರ್ಧರಿಸಿದ್ದೇವೆ ಎಂದು ಹೇಳುತ್ತಾರೆ. ಪ್ರಾರ್ಥನಾರ ಪತಿ ಅಭಿಷೇಕ್ ಜಾವಕರ್ ಕೂಡ ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಾರೆ. ಈ ಬಗ್ಗೆ ಸ್ವತಃ ನಟಿಯೇ ಮಾತನಾಡಿ, ಅಭಿಷೇಕ್ ಪ್ರಾಣಿಗಳ ಮೇಲೆ ತುಂಬಾ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಅವರಿಗೆ ಬಾಲ್ಯದಿಂದಲೂ ಪ್ರಾಣಿಗಳೆಂದರೆ ತುಂಬಾ ಇಷ್ಟ ಅಂತಾ ಹೇಳಿದ್ದಾರೆ.

Tags